ಸಂಗೀತಾ ಶೃಂಗೇರಿ ಮುಖ್ಯವಾಗಿ ಕನ್ನಡ ಭಾಷೆಯಲ್ಲಿ ನಟನೆ ಮಾಡುವ ಭಾರತೀಯ ನಟಿ ಆಗಿದ್ದಾರೆ. ಕನ್ನಡ ದೈನಂದಿನ ಧಾರಾವಾಹಿ ಹರ ಹರ ಮಹಾದೇವ ದಲ್ಲಿನ ಸತಿ / ಪಾರ್ವತಿ ಪಾತ್ರಕ್ಕಾಗಿ ಅವರು ಜನಪ್ರಿಯವಾಗಿದ್ದಾರೆ. ಅವರು ೨೦೧೪ ರಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಅಗ್ರ ೧೦ರಲ್ಲಿ ಸ್ಥಾನ ಪಡೆದಿದ್ದರು. ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. == ವೈಯಕ್ತಿಕ ಜೀವನ == ಸಂಗೀತಾ ಅವರು ಶೃಂಗೇರಿಯಲ್ಲಿ ಜನಿಸಿದರು. ಇವರ ತಂದೆ ಶಿವ ಕುಮಾರ್ ಕೆ ಭಾರತೀಯ ವಾಯುಪಡೆಯ ಮಾಜಿ ಸೈನಿಕ ಮತ್ತು ತಾಯಿ ಭವಾನಿ ಶಿವ ಕುಮಾರ್ ಗಿಡಮೂಲಿಕೆಗಳ ಆರೋಗ್ಯ ತರಬೇತುದಾರರಾಗಿದ್ದಾರೆ. ಶೃಂಗೇರಿ ಅವರು ಎನ್ಸಿಸಿ ಕೆಡೆಟ್ ಆಗಿದ್ದು, ೨೦೧೨ರಲ್ಲಿ ಖೋ ಖೋ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದರು. == ವೃತ್ತಿಜೀವನ == ಸಂಗೀತಾ ಸ್ಟಾರ್ ಸುವರ್ಣದಲ್ಲಿನ ಹರ ಹರ ಮಹಾದೇವ ಕನ್ನಡ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟರು. ಈ ಪೌರಾಣಿಕ ನಾಟಕವು ಇವರಿಗೆ ಸತಿ / ಪಾರ್ವತಿ ಎಂಬ ಅಡ್ಡಹೆಸರನ್ನು ತಂದುಕೊಟ್ಟಿತ್ತು. ನಂತರ ಅವರು ಅದೇ ಚಾನೆಲ್ ಆಯೋಜಿಸಿದ್ದ ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಅವರ ಮೊದಲ ಚಲನಚಿತ್ರ +, ಇದು ೨೦೧೮ ರಲ್ಲಿ ಬಿಡುಗಡೆಯಾಯಿತು. ಅವರು + ಕನ್ನಡ ಚಲನಚಿತ್ರಕ್ಕೆ ಸಹಿ ಹಾಕುವ ಮೊದಲು ೫೦ಕ್ಕೂ ಹೆಚ್ಚು ಸ್ಕ್ರಿಪ್ಟ್‌ಗಳನ್ನು ಓದಿದ್ದರು. + ಉಪೇಂದ್ರ ಅವರ ಕಲ್ಟ್ ಕ್ಲಾಸಿಕ್ "ಎ" ನ ಸೂಕ್ಷ್ಮ ಉತ್ತರಭಾಗವಾಗಿದೆ; ಚಿತ್ರವನ್ನು ಉಪೇಂದ್ರ ಅವರ ಸಹವರ್ತಿ ವಿಜಯ್ ಸೂರ್ಯ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶಸ್ವಿನಿ ಪಾತ್ರಕ್ಕಾಗಿ ಸಂಗೀತಾ ಅವರಿಗೆ ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ತಂದುಕೊಟ್ಟಿತು. ಸಂಗೀತಾ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ರಕ್ಷಿತ್ ಶೆಟ್ಟಿ ನಟನೆಯ ಮತ್ತು ಪರಮವಾ ಸ್ಟುಡಿಯೋಸ್ ನಿರ್ಮಿಸಿದ ಹಾಗೂ ಪುಷ್ಕರ್ ಫಿಲ್ಮ್ಸ್ ಪ್ರಸ್ತುತಪಡಿಸಿದ ೨೦೨೨ ರಲ್ಲಿ ಬಿಡುಗಡೆಯಾದ ೭೭೭ ಚಾರ್ಲಿ ಚಿತ್ರವಾಗಿತ್ತು. ಸಂಗೀತಾ ಅವರನ್ನು ಫೇಸ್ಬುಕ್ ಮೂಲಕ ಚಲನಚಿತ್ರದ ಆಡಿಷನ್‌ಗೆ ಆಯ್ಕೆ ಮಾಡಲಾಯಿತು. ಇವರೊಂದಿಗೆ ೨,೭೦೦ ಮಂದಿಯನ್ನು ಆಡಿಷನ್‌ ನೀಡಿದ್ದರು. ಕೊನೆಗೆ ಇವ ಈ ಪಾತ್ರ ಸಿಕ್ಕಿತು. ೨೦೨೨ ರಲ್ಲಿ ಲಕ್ಕಿ ಮ್ಯಾನ್ ಮತ್ತು ಪಂಪಾ ಪಂಚಲ್ಲಿ ಪರಶಿವಮೂರ್ತಿ ಚಲನಚಿತ್ರದಲ್ಲಿ ಕೂಡ ನಟಿಸಿದರು. == ಚಲನಚಿತ್ರಗಳ ಪಟ್ಟಿ == === ಸಿನಿಮಾ === ಎಲ್ಲಾ ಚಲನಚಿತ್ರಗಳು ಕನ್ನಡ ಭಾಷೆಯಲ್ಲಿಯೇ ಇದೆ, ಬೇರೆ ಭಾಷೆಯಲ್ಲಿದ್ದರೆ ಉಲ್ಲೇಖಿಸಲಾಗಿದೆ === ದೂರದರ್ಶನ === == ಉಲ್ಲೇಖಗಳು ==